Saturday, March 11, 2017

ಶ್ರೀ ಭವಾನಿ ಶಂಕರ ದೇವಸ್ಥಾನ ಜೀರ್ಣೋದ್ಧಾರ

ಶ್ರೀ ಶಾರದಾ ಗುರುಭ್ಯೋನಮ:
ಶ್ರೀ ಭವಾನಿಶಂಕರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಶಂಕರಪುರ, ಶಾನುವಳ್ಳಿ ಅಂಚೆ,
ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.-577126
Email ID : sribhavanishankaratemple@gmail.com   |   Website : bhavanishankaratemple.org
ಆಸ್ತಿಕ ಸದ್ಭಕ್ತರೇ,

ಸಚ್ಚಿದಾನಂದ ಸ್ವವರೂಪಿಯಾದ ಸರ್ವಶಕ್ತ ಭಗವಂತನಿಗೆ ರೂಪ–ಗುಣಗಳು ಇಲ್ಲದಿದ್ದರೂ, ಭಕ್ತನಾದವನು ತನ್ನ ಅಂತ:ಕರಣವನ್ನು ಕ್ರಮವಾಗಿ ಪರಿಷ್ಕರಿಸಿಕೊಳ್ಳಲು ಶಾಸ್ತ್ರೀಯವಾದ ಗುಣ–ರೂಪಗಳನ್ನು ಅನುಸರಿಸಿ ಕಲ್ಪಿಸಿಕೊಟ್ಟಿರುತ್ತಾರೆ. ಇದೇ ಕ್ರಮದಲ್ಲಿ ಭಗವಂತನ ಉಪಾಸನೆಯನ್ನು ನಡೆಸಿ ನಮ್ಮ ಪೂರ್ವಜರು ಕೃತಾಥ‍್ರಾಗಿರುತ್ತಾರೆ. “ಭವೋ ಭವತು ಭವ್ಯಾಯ’’ ಎಂಬುದಾಗಿ 
ಶಾಸ್ತ್ರದಲ್ಲಿ ಉಲ್ಲೇಖವಿರುವಂತೆ, ಸಾಂಸಾರಿಕವಾದ ಕಷ್ಟ ನಿವೃತ್ತಿ ಮತ್ತು ಇಷ್ಟ ಪ್ರಾಪ್ತಿ ಶಿವಾರಾಧನೆಯಿಂದ ಸಾಧ್ಯವಾಗುತ್ತದೆ.
    ಶಂಕರಪುರ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯ ಕಟ್ಟಕಡೆಯ ಗ್ರಾಮವಾಗಿದ್ದು ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿದೆ. ಪ್ರಕೃತ ಗ್ರಾಮಸ್ಥರೆಲ್ಲರೂ ಸೇರಿ ಪೂರ್ವಿಕರು ನಿರ್ಮಾಣ ಮಾಡಿದ್ದ, ಈಗ ಸಂಪೂರ್ಣ ಶಿಥಲಗೊಂಡಿರುವ, ರಥೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವಗಳು ನಡೆಯುತ್ತಿದ್ದ 400 ವರ್ಷಗಳ ಇತಿಹಾಸವಿರುವ ಶ್ರೀ ಗಣಪತಿ, ಶ್ರೀ ಭವಾನಿ ಅಮ್ಮನವರು, ಶ್ರೀ ರಕ್ತೇಶ್ವರಿ, ಶ್ರೀ ಕ್ಷೇತ್ರಪಾಲ, ಶ್ರೀ ನಂದಿ ಅಂಗ ಪ್ರತ್ಯಂಗ ಪರಿವಾರ ದೇವತೆಗಳನ್ನೊಳಗೊಂಡ ಶ್ರೀ ಭವಾನಿಶಂಕರ ದೇವಾಲಯವನ್ನು ಅಂದಾಜು ರೂ. 36 ಲಕ್ಷ ವೆಚ್ಚದಲ್ಲಿ ಶಿಲಾಮಯ ದೇವಾಲಯವಾಗಿ ಪುನರ ನಿರ್ಮಾಣ ಮಾಡಬೇಕೆಂದು ಸಂಕಲ್ಪಿಸಿ ಶೃಂಗೇರಿ ಶ್ರೀ ಜಗದ್ಗುರು ವರೇಣ್ಯರಲ್ಲಿ ಭಿನ್ನವಿಸಿಕೊಂಡಾಗ ಅವರು ಪರಿಪೂರ್ಣ ಆಶೀರ್ವಾದವನ್ನು ಮಾಡಿರುತ್ತಾರೆ.
ಗರ್ಭಗುಡಿ, ನಮಸ್ಕಾರ ಮಂಟಪ, ಧ್ಯಾನಗುಡಿರೂ. 1 ಲಕ್ಷ + 16 ಲಕ್ಷ
ಗೋಪುರರೂ. 19 ಲಕ್ಷ
ದೇವಸ್ಥಾನದ ಸುತ್ತಲಿನ ಚಂದ್ರಶಾಲೆ(ಪೌಳಿ)ರೂ. 30 ಲಕ್ಷ
ಒಟ್ಟು ಅಂದಾಜು ವೆಚ್ಚರೂ. 66 ಲಕ್ಷ
    ಈ ಗ್ರಾಮವು 19 ಕುಟುಂಬಗಳನ್ನೊಳಗೊಂಡ ಚಿಕ್ಕ ಗ್ರಾಮವಾಗಿದ್ದು ಭಕ್ತ ಬಾಂಧವರ ಸಹಾಯದಿಂದಲೇ ಈ ಕಾರ್ಯವಾಗಬೇಕಿದ್ದು ತಾವುಗಳು ಈ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತನು-ಮನ- ಧನದೊಂದಿಗೆ ಸಹಕರಿಸಿ ಶ್ರೀ ಭವಾನಿಶಂಕರ ದೇವರ ಕೃಪೆಗೆ ಪಾತ್ರರಾಗಿ ಮಂಗಳ ಪರಂಪರೆಗೆ ಭಾಜನರಾಗಬೇಕಾಗಿ ವಿನಂತಿಸುತ್ತೇವೆ.
     ಗಣಪತಿ, ಭವಾನಿ ಅಮ್ಮನವರು, ನಂದಿ, ದತ್ತಾತ್ರೇಯ, ದಕ್ಷಿಣಾಮೂರ್ತಿ, ಲಕ್ಷ್ಮಿ ವಿಗ್ರಹಗಳಾಗಬೇಕಾಗಿದ್ದು ಆಸಕ್ತರು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಒಂದೊಂದರ ವೆಚ್ಚ ಭರಿಸಬಹುದಾಗಿದೆ.
ಸ್ಥಳ : ಶಂಕರಪುರ
ದಿನಾಂಕ: 23-02-2017.
ಶ್ರೀ ದುರ್ಮುಖಿ ನಾಮ ಸಂವತ್ಸರದ ಮಾಘ ಬಹುಳ ದ್ವಾದಶಿ
ಇಂತಿ ತಮ್ಮ
ಶಂಕರಪುರ ಗ್ರಾಮಸ್ತರು


ವಿ.ಸೂ: ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಲುವಾಗಿಲು ಶಾಖೆ IFSC Code SBIN0041087 ಉಳಿತಾಯ ಖಾತೆ ಸಂಖ್ಯೆ 64213722441 ಕ್ಕೆ ಜಮಾ ಮಾಡಿ ತಮ್ಮ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಮಿತಿಗೆ ಪತ್ರ / ಇ-ಮೇಲ್/ದೂರವಾಣಿ ಮೂಲಕ ತಿಳಿಸಲು ಕೋರಿದೆ.

ಎಸ್.ಶಂಕರಭಟ್ಟ
ಅಧ್ಯಕ್ಷರು
9481212905
ಕೆ.ಟಿ. ರವೀಶ
ಕಾರ್ಯದರ್ಶಿ
9480139266
ಎ.ಎಸ್.ಸುಂದರ್
ಸಹ ಕಾರ್ಯದರ್ಶಿ
9449150140
ಎಸ್.ಪ್ರಕಾಶ
ಖಜಾಂಚಿ
9480420259
ಬಿ.ಆರ್.ಲಕ್ಷ್ಮೀಶರಾವ್
ಪ್ರಧಾನ ಅರ್ಚಕರು
 ವೇ.ಬ್ರಂ.ಶ್ರೀ ಬಿ.ಎಸ್. ಶಿವಶಂಕರಭಟ್ಟರು
ವೇದ ವಿದ್ವಾಂಸರು ಮತ್ತು ಜ್ಯೋತಿಷಿಗಳು
ಬಿಳುವಿನಕೊಡಿಗೆ

ಜಿ.ಎಂ ವಿಶ್ವನಾಥ್, ಬಿ.ಎ. ಎಲ್ ಎಲ್ ಬಿ
ನ್ಯಾಯವಾದಿಗಳು, ಕೊಪ್ಪ
ಕಾನೂನು ಸಲಹೆಗಾರರು
ಎಸ್.ಪಿ.ಪ್ರಸನ್ನ, ನರಸಿಂಹರಾಜಪುರ
ಗೌತಮ್.ಎಸ್.ಎಸ್. ಬಿ.ಇ., ಸಿವಿಲ್
ತಾಂತ್ರಿಕ ಸಲಹೆಗಾರರು
ಸುಖೇಶ್ ಆಚಾರ್ಯ
ಕಲಾದರ್ಶೀನಿ ಶಿಲ್ಪಕುಟೀರ ದೇವರಮನೆ
ಹರಿಹರಪುರ, ಪ್ರಧಾನ ಶಿಲ್ಪಿಗಳು

No comments:

Post a Comment